Chief Editor
Manohar. R (Manu)
Photo Journalist
chitrataramanu@gmail.com
+91 9845549026
ಚಾಂದಿನಿಬಾರ್ ನಲ್ಲಿ ಜೀವನ ರೂಪಿಸಿಕೊಂಡವರ ಮತ್ತೊಂದು ಕಥೆ 3/5 ***
Posted date: 23 Sun, Apr 2023 08:37:34 PM
ಹೆಸರಿನಲ್ಲೇ ಕುತೂಹಲ‌ ಮೂಡಿಸಿದ್ದ ಚಾಂದಿನಿ ಬಾರ್ ಚಿತ್ರದ  ಒಳಗೆ ಏನೆಲ್ಲ ಇರಬಹುದು ಎಂಬ ಕುತೂಹಲಕ್ಕೆ ಇದೀಗ ಉತ್ತರ ಸಿಕ್ಕಿದೆ.
 
ನಾವು ಏನು ಕಲ್ಪನೆ ಮಾಡಿಕೊಳ ಚಿತ್ರಣ ಅಲ್ಲಿ ಸಿಗುತ್ತದೆ. ಅದರ ಅಳಕ್ಕೆ ಇಳಿಯಬೇಕಷ್ಟೇ. ತಮ್ಮ ಜೀವನದಲ್ಲಿ   ಖುಷಿಯಾದಾಗ, ದುಃಖ ಆಗಾಗ ಅದನ್ನು ವ್ಯಕ್ತಪಡಿಸಲು ಬಾರಿಗೆ ಬರುತ್ತಾರೆ ಎನ್ನುವುದಷ್ಟೇ ನಮಗೆ ಗೊತ್ತು. ಆದರೆ ಅಲ್ಲಿಯೇ ತಮ್ಮ ಜೀವನ ರೂಪಿಸಿಕೊಂಡ ಒಂದಷ್ಟು ಜನರ ಕಥೆಯಿದು. ಬಾರ್‌ನಲ್ಲಿ ಕೆಲಸ ಮಾಡುತ್ತ ತಮ್ಮ ಬದುಕನ್ನು ಕಟ್ಟಿಕೊಂಡವರ ಕಥೆಯನ್ನು  ಚಾಂದಿನಿಬಾರ್ ಹೇಳುತ್ತದೆ. ಬಾರ್ ಎಂದರೆ  ಕುಡುಕರ ಅಡ್ಡ ಅಷ್ಟೇ ಅಲ್ಲ, ಅಲ್ಲಿ ಒಂದಷ್ಟು ಭಾವನೆಗಳಿವೆ, ಕನಸುಗಳನ್ನು ಕಟ್ಟಿಕೊಂಡವರ ಕಥೆಯಿದೆ. ಇಲ್ಲಿ ಮುಖ್ಯವಾಗಿ ಬರುವುದು ಹುಡುಗನೊಬ್ಬನ ಕಥೆ, ಸಹ ನಿರ್ದೇಶಕನಾಗಿ ಕೆಲಸ ಮಾಡಿದರೂ, ಪೇಟೆಂಟ್ ಸಿಗದೆ ಹತಾಶನಾದ ಹುಡುಗನೊಬ್ಬ ಮೈಸೂರಿಗೆ ಬಂದು ಇದೇ ಬಾರ್ ನಲ್ಲಿ ಸಪ್ಲೈಯರ್ ಆಗಿರುತ್ತಾನೆ, ಆತನ ಕಥೆಯ ಜೊತೆಗೆ ಬರುವ ಒಂದಷ್ಟು ಪಾತ್ರಗಳ  ಚಿತ್ರಣವನ್ನು ಇಲ್ಲ ತೆರೆದಿಡಲಾಗಿದೆ.  ನಾಯಕ ರಾಘವೇಂದ್ರ  ನಿರ್ದೇಶನ ಹಾಗೂ ನಟನೆ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ.  ಇಲ್ಲಿ ಜೀವನ, ಪ್ರೀತಿ, ಪ್ರೇಮ,ತ್ಯಾಗ, ನಗು, ಅಳು ಎಕ್ಕವೂ ಇದೆ. ಹತಾಶ ಭಾವನೆಯಿಂದ ಜೀವನ ಕಟ್ಟಿಕೊಳ್ಳಲು ಹೊರಟ ಹುಡುಗ ಏನಾಗುತ್ತಾನೆ, ಆತನ ಜೀವನ ಯಾವ ಹಾದಿ ಪಡೆದುಕೊಳ್ಳುತ್ತದೆ ಎನ್ನುವುದೇ ಚಿತ್ರದ ಕಥೆ.  ಸುಮ ಎಂಬ ಮಿಡಲ್ ಕ್ಲಾಸ್ ಹುಡುಗಿಯ ಪಾತ್ರವನ್ನು ಸುಕೃತಿ ಅದ್ಭುತವಾಗಿ ನಿಭಾಯಿಸಿದ್ದಾರೆ.  ವೇಶ್ಯೆಯ  ಪಾತ್ರವನ್ನು‌ ರಶ್ಮಿ ಪರಿಣಾಮಕಾರಿಯಾಗಿ ನಿಭಾಯಿಸಿದ್ದಾರೆ. 
 
ಬಾರ್‌ನಲ್ಲಿ ಕೆಲಸ ಮಾಡೋ ಹುಡುಗನಲ್ಲಿ ಪ್ರೀತಿ ಹೇಗೆ ಹುಟ್ಟುತ್ತೆ, ಹೇಗೆ ಬ್ರೇಕಪ್ ಆಗುತ್ತೆ, ನಂತರ ಆತನ ಜೀವನ ಹೇಗೆ ಸಾಗುತ್ತೆ ಇದೆಲ್ಲವನ್ನೂ ಚಾಂದಿನಿ ಬಾರ್ ಕಟ್ಟಕೊಟ್ಟಿದೆ. ಚಿತ್ರದ ಎರಡು ಹಾಡುಗಳು ಸದಾ  ಕೇಳುವಂತಿವೆ,  ಹಾಗೂ ಕ್ಯಾಮೆರಾ ವರ್ಕ್ ಕೂಡ ಸಿನಿಮಾದ ಅಂದವನ್ನು ಹೆಚ್ಚಿಸಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಚಾಂದಿನಿಬಾರ್ ನಲ್ಲಿ ಜೀವನ ರೂಪಿಸಿಕೊಂಡವರ ಮತ್ತೊಂದು ಕಥೆ 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.